ಕರ್ನಾಟಕ

karnataka

ETV Bharat / videos

ರೈತ ಮುಖಂಡ ರಾಜೇಸಾಬ್​ ಮೇಲಿನ ಹಲ್ಲೆಗೆ ಖಂಡನೆ: ಪ್ರತಿಭಟನೆಗೆ ಇಳಿದ ಸಂಘಟನೆಗಳು - haveri protest latest news

By

Published : Jan 10, 2020, 10:39 AM IST

ಹಾವೇರಿ ತಾಲೂಕು ರೈತ ಸಂಘದ ಅಧ್ಯಕ್ಷ ರಾಜೇಸಾಬ್ ಮೇಲಿನ ಹಲ್ಲೆ ಖಂಡಿಸಿ ರೈತ ಸಂಘಟನೆಗಳು ನಿನ್ನೆ ಪ್ರತಿಭಟನೆ ನಡೆಸಿದವು. ನಗರದ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ದೇವಗಿರಿ ಗ್ರಾಮದ ಜನಪ್ರತಿನಿಧಿಗಳು ನೆರೆ ಸಂತ್ರಸ್ತರ ಪರ ಹೋರಾಟ ಮಾಡಿದ್ದಕ್ಕೆ ಅವರ ಮೇಲೆ ಹಲ್ಲೆ ನಡೆದಿದೆ ಎಂದು ರೈತ ಮುಖಂಡರು ಆರೋಪಿಸಿದರು. ನೆರೆಸಂತ್ರಸ್ತರ ಮನೆ ವಿತರಣೆ ವೇಳೆ ಪರಿಹಾರದಲ್ಲಿ ತಾರತಮ್ಯವಾಗಿತ್ತು. ಇದನ್ನ ಪ್ರಶ್ನಿಸಿದ ರಾಜೇಸಾಬ್ ಮೇಲೆ ದೇವಗಿರಿ ಗ್ರಾಮ ಪಂಚಾಯತ್ ಸದಸ್ಯರು ಹಲ್ಲೆ ನಡೆಸಿದ್ದಾರೆ. ನಾವು ಆದ ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ತಪ್ಪಾ ಎಂದು ಪ್ರತಿಭಟನಾಕಾರರ ಪ್ರಶ್ನಿಸಿದರು. ಜಿಲ್ಲಾಡಳಿತ ಈ ಕೂಡಲೇ ತಪ್ಪಿತಸ್ತರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವಂತೆ ಸರ್ಕಾರವನ್ನ ಒತ್ತಾಯಿಸಿದರು.

ABOUT THE AUTHOR

...view details