ಪೊಲೀಸರ ಬಲಪ್ರಯೋಗಕ್ಕೆ ಜಗ್ಗಲ್ಲ : ಫ್ರೀಡಂ ಪಾರ್ಕ್ನಲ್ಲಿ ಪರೇಡ್ ಮಾಡೇ ಮಾಡ್ತೀವಿ ಅಂತಿರೋ ರೈತರು - ಫ್ರೀಡಂ ಪಾರ್ಕ್ ನಲ್ಲಿ ಪರೇಡ್ ಮಾಡೇ ಮಾಡ್ತೀವಿ ರೈತರ ನಿರ್ಧಾರ
ತುಮಕೂರು ರಸ್ತೆ ನೈಸ್ ರೋಡ್ ಬಳಿಯ ಮಾದಾವರ ಕ್ರಾಸ್ನಲ್ಲಿ ನೂರಾರು ರೈತರು ಜಮಾವಣೆಗೊಳ್ಳುತ್ತಿದ್ದಾರೆ. ರಾತ್ರಿಯಿಂದಲೇ ಹಾವೇರಿ, ಕೊಪ್ಪಳ, ಗದಗ, ರಾಯಚೂರು, ಚಿಕ್ಕಮಂಗಳೂರು ಜಿಲ್ಲೆಯ ರೈತರು ಬಂದು ಸೇರಿದ್ದಾರೆ. ಟ್ರ್ಯಾಕ್ಟರ್ ಮೂಲಕ ಪರೇಡ್ ನಡೆಸಬೇಕೆಂದಿದ್ದೆವು, ಆದ್ರೆ ಹಳ್ಳಿಹಳ್ಳಿಗಳಲ್ಲೇ ಟ್ರ್ಯಾಕ್ಟರ್ ಗಳನ್ನು ತಡೆದಿದ್ದಾರೆ. ಆದರೂ ಖಾಸಗಿ ವಾಹನಗಳಲ್ಲಿ, ಬಾಡಿಗೆ ವಾಹನಗಳಲ್ಲಿ ಬಂದಿದ್ದೇವೆ. ಪೊಲೀಸರು ತಡೆದರೂ ಬೆಂಗಳೂರು ಪ್ರವೇಶ ಮಾಡುತ್ತೇವೆ ಎಂದು ರೈತರು ಸ್ಪಷ್ಟನೆ ಹೇಳಿದ್ದಾರೆ. ತಾವು ಬೀಡುಬಿಟ್ಟಿರುವ ಸ್ಥಳದಲ್ಲೇ ಬೆಳಗಿನ ಉಪಹಾರ ತಯಾರಿಸಿ ಸೇವಿಸಿದರು. ರಾಷ್ಟ್ರಧ್ವಜ, ಹಸಿರು ಬಾವುಟ ಹಿಡಿದು ಪ್ರತಿಭಟನೆ ಗೆ ಸಜ್ಜಾಗಿದ್ದಾರೆ.