ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಳಗಾವಿಯಲ್ಲೂ ಬೆಂಬಲ - ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಳಗಾವಿಯಲ್ಲು ಬೆಂಬಲ
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಬೆಳಗಾವಿಯಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಿ ಕೇಂದ್ರ ಸರ್ಕಾರ ನೂತನ ಕೃಷಿ ಮಸೂದೆ ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಈ ವೇಳೆ ತಾಲೂಕಿನ ಹಲಗಾ - ಬಸ್ತವಾಡ್ ಬಳಿಯಿರುವ ಸುವರ್ಣ ಸೌಧದ ಎದುರಿಗೆ ಟ್ರ್ಯಾಕ್ಟರ್ ಗೆ ಧ್ವಜಸ್ಥಂಭ ಕಟ್ಟಿ ರೈತರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡಿ ಸಂಭ್ರಮಿಸಿದರು. ಬೆಳಗ್ಗೆಯಿಂದಲೇ ರೈತರು ನೂತನ ಕೃಷಿ ಮಸೂದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಸುವರ್ಣಸೌಧ ಎದುರು ಟ್ರ್ಯಾಕ್ಟರ್ ಪರೇಡ್ ನಡೆಸಲು ಜಿಲ್ಲೆಯ ವಿವಿಧೆಡೆಯಿಂದ ಬೆಳಗಾವಿಯತ್ತ ಆಗಮಿಸುತ್ತಿದ್ದು, ಸುವರ್ಣಸೌಧದಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರುವ ಜಿಲ್ಲಾ ಕ್ರೀಡಾಂಗಣವರೆಗೂ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲಿದ್ದಾರೆ. ರೈತರಿಗೆ ಪೊಲೀಸರು ಎಸ್ಕಾರ್ಟ್‌ನಲ್ಲಿ ಭದ್ರತೆ ನೀಡಿದ್ದಾರೆ.