ಕರ್ನಾಟಕ

karnataka

ETV Bharat / videos

ಬಳ್ಳಾರಿ ವಿಭಜನೆ ಖಂಡಿಸಿ ರೈತರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ... - ballary protest

By

Published : Nov 28, 2020, 7:07 PM IST

ಬಳ್ಳಾರಿ: ನಗರದ ಗ್ರಾಮಾಂತರ ಪ್ರದೇಶದ ಹೊರವಲಯದ ಜೋಳದರಾಶಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬಳ್ಳಾರಿ, ಚಾಗನೂರು - ಸಿರಿವಾರ ನೀರಾವರಿ ಭೂ ರಕ್ಷಣೆ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಬಳ್ಳಾರಿ ವಿಭಜನೆ ಮಾಡುವುದನ್ನು ಖಂಡಿಸಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಕವಿ ಮತ್ತು ಸಾಹಿತಿ ಚಂದ್ರಶೇಖರ ರೆಡ್ಡಿ, ಸ.ರಘುನಾಥ ಮತ್ತು ರೈತ ಹೋರಾಟಗಾರ ಮಲ್ಲಿಕಾರ್ಜುನ ರೆಡ್ಡಿ, ಹೇಮಂತ ರಾಜು, ಗಂಗಿರೆಡ್ಡಿ, ಡಿ.ಜಿ ವಿಠಲ್, ಮಾಧವರೆಡ್ಡಿ, ಚಾನಳ್ ಶೇಖರ್, ಎರಿಸ್ವಾಮಿ, ಸಿದ್ಮಲ್ ಮಂಜುನಾಥ ಮತ್ತು ರೈತರು ಭಾಗವಹಿಸಿದ್ದರು.

ABOUT THE AUTHOR

...view details