ನಾಳೆ ರೈತರ ಪರೇಡ್: ಬಸ್ ಏರಿ ಬೆಂಗಳೂರಿನತ್ತ ಹೊರಟ ವಿಜಯಪುರದ ರೈತರು - ಗಣರಾಜ್ಯೋತ್ಸವಕ್ಕೆ ಬೆಂಗಳೂರಿನಲ್ಲಿ ರೈತರಿಂದ ಪ್ರತಿಭಟನೆ
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಟ್ಯ್ರಾಕ್ಟರ್ ಮೆರವಣಿಗೆಗೆ ವಿಜಯಪುರದಿಂದ ನೂರಾರು ರೈತರು ಮಿನಿ ಬಸ್, ಟ್ಯ್ರಾಕ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ನಗರದ ಅಂಬೇಡ್ಕರ್ ಸರ್ಕಲ್ನಿಂದ ಬಸ್ ಮೂಲಕ ತೆರಳಿದರು. ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಕ್ಷಣ ಅವೈಜ್ಞಾನಿಕ ಕೃಷಿ ನೀತಿ ತಕ್ಷಣ ಕೈ ಬಿಡಬೇಕು ಎಂದು ಒತ್ತಾಯಿಸಿದರು.