ಸಾಂಕೇತಿಕವಾಗಿ ರೈಲು ತಡೆ ನಡೆಸುವಲ್ಲಿ ಯಶಸ್ವಿಯಾದ ರೈತರು - ಸಾಂಕೇತಿಕವಾಗಿ ರೈಲು ತಡೆ ನಡೆಸುವಲ್ಲಿ ಯಶಸ್ವಿಯಾದ ರೈತರು
ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ರೈಲು ತಡೆ ಚಳವಳಿಗೆ ರಾಜ್ಯದಲ್ಲಿ ಬೆಂಬಲ ಸೂಚಿಸಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈಲು ತಡೆ ಪ್ರತಿಭಟನೆ ನಡೆಯಿತು. ಪೊಲೀಸರ ಸರ್ಪಗಾವಲಿ ಮಧ್ಯೆಯೇ ರೈಲ್ವೆ ನಿಲ್ದಾಣ ಒಳಹೋದ ರೈತರು, ನಿಜಾಮುದ್ದೀನ್ - ಯಶವಂತಪುರ ರೈಲಿನ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್ ಬೆಂಗಳೂರಿನಲ್ಲಿ ರೈತರ ಸಂಖ್ಯೆ ಕಡಿಮೆ ಇದ್ದರೂ, ರಾಜ್ಯಾದ್ಯಂತ ಐವತ್ತು ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದಾರೆ ಎಂದರು. ಈ ಕುರಿತಂತೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.