ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯಿಂದ ರೈತರಿಗೆ ಅನುಕೂಲವಿಲ್ಲ: ಸಿದ್ದರಾಮಯ್ಯ - Siddaramaiah
ಕೇಂದ್ರ ಸರ್ಕಾರ ರೈತರ ಸುಮಾರು 17 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದ್ರೆ ಇದರ ಅನುಕೂಲ ರೈತರಿಗೆ ಆಗುತ್ತಿಲ್ಲ. ಹೀಗಾಗಿ ಮೊದಲೇ ಕೊರೊನಾ ಮತ್ತು ನೆರೆ ಹಾವಳಿಯಿಂದ ಇಳುವರಿ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಬೆಂಬಲ ಬೆಲೆ ಸಿಗದಿದ್ದರೆ ಹೇಗೆ ಎಂದು ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಉತ್ತರ ಸಿಕ್ಕಿಲ್ಲವೆಂದು ಸದನದಲ್ಲಿ ಅವರು ಹೇಳಿದ್ದಾರೆ. ಇಂದು ನಡೆಯುತ್ತಿರುವ ಭಾರತ್ ಬಂದ್ ಬೆಂಬಲಿಸಿ ಕಾಂಗ್ರೆಸ್ ನಾಯಕರು ಕಪ್ಪು ಪಟ್ಟಿ ಧರಿಸಿ ಅಧಿವೇಶನದಲ್ಲಿ ಪಾಲ್ಗೊಂಡ್ರು.