ಮಾದಾವರ ತಲುಪಿದ ರೈತರ ಟ್ರ್ಯಾಕ್ಟರ್: ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ
ಬೆಂಗಳೂರು: ಪೊಲೀಸರ ವಿರೋಧದ ನಡುವೆಯೂ ತುಮಕೂರು ರಸ್ತೆಯ ಮಾದಾವರ ಕ್ರಾಸ್ ಬಳಿ ರೈತರ ಟ್ರಾಕ್ಟರ್ ಬಂದು ತಲುಪಿದೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತ ಪರೇಡ್ 10 ಗಂಟೆಗೆ ಆರಂಭವಾಗಲಿದೆ. ರೈತರ ಟ್ರಾಕ್ಟರ್ ಗಳನ್ನು ಎಲ್ಲಾ ದಿಕ್ಕುಗಳಲ್ಲಿ ಪೊಲೀಸರು ತಡೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, "ಶಿವಮೊಗ್ಗದಲ್ಲಿ ಅಡ್ಡಿ ಮಾಡಿದವರು, ಈಗ ಯಾಕೆ ಅಡ್ಡಿಪಡಿಸ್ತಿದಾರೆ. ರೈತರ ಟ್ರ್ಯಾಕ್ಟರ್ ಭಯೋತ್ಪಾದಕರ ತರ ಕಾಣ್ತಿದೆಯಾ" ಎಂದು ಕಿಡಿಕಾರಿದರು. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.