ಕಾಲುವೆಗೆ ನೀರು ಹರಿಸುತ್ತಿಲ್ಲ ಎಂದು KBJNL ಎಇಇ ಅಂಗಿ ಹಿಡಿದೆಳೆದಾಡಿದ ರೈತರು - vijayapura district lateste news
ವಿಜಯಪುರ:ಕಾಲುವೆಗೆ ನೀರು ಹರಿಸುತ್ತಿಲ್ಲ ಎಂದು ಕೆಬಿಜೆಎನ್ಎಲ್ನ ಎಇಇ ಅಂಗಿ ಹಿಡಿದು ರೈತರು ಎಳೆದಾಡಿದ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಕೆನಾಲ್ ಬಳಿ ನಡೆದಿದೆ. ಕೆಬಿಜೆಎನ್ಎಲ್ ಎಇಇ ಎಸ್ ಜೆ ಹೊಸಗೌಡ ಅವರ ವಾಹನ ತಡೆದ ರೈತರು ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಸಸಗೌಡ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ರೈತರು ಇಂಡಿ ಮುಖ್ಯ ಕಾಲುವೆಯಿಂದ ನೀರು ಬಿಡಲು ಒತ್ತಾಯ ಮಾಡಿದರು.