ಕೇಳೋರಿಲ್ಲ, ಕೊಳ್ಳುವವರೂ ಇಲ್ಲ.. ರೈತರ 200 ಟನ್ ಟೊಮ್ಯಾಟೊ ಬೀದಿಪಾಲು! - ಕೊರೊನಾ ವೈರಸ್
ಮೈಸೂರು : ಖರೀದಿದಾರರಿಲ್ಲದೇ ಸುಮಾರು 200 ಟನ್ ಟೊಮ್ಯಾಟೊವನ್ನು ರಸ್ತೆಯಲ್ಲೇ ಸುರಿದು ಹೋದ ಘಟನೆ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ. ನೆರೆ ರಾಜ್ಯ ಕೇರಳ,ತಮಿಳುನಾಡಿನಿಂದ ಯಾವುದೇ ವರ್ತಕರು ಬಂದಿಲ್ಲ. ಹೀಗಾಗಿ ರೈತರು ರಸ್ತೆ ಮೇಲೆ ಟೊಮ್ಯಾಟೊ ಸುರಿದು ತಮ್ಮ ಸಂಕಟ ಹೊರ ಹಾಕಿದ್ದಾರೆ..