ಸಹಾಯ ಹಸ್ತ ಚಾಚಿದ ಮಾಜಿ ಶಾಸಕ.. ನೆರೆ ಪೀಡಿತರಿಗೆ ಅಗತ್ಯ ವಸ್ತುಗಳ ರವಾನೆ - kannada news
ಉತ್ತರಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಿಗೆ 18 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿಗಳನ್ನು ಲಾರಿಗಳ ಮೂಲಕ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರ ನೇತೃತ್ವದಲ್ಲಿ ಕಳುಹಿಸಿ ಕೊಡಲಾಗುತ್ತಿದೆ. ಕೆಲ ದಿನಗಳಿಂದ ಎಪಿಎಂಪಿ ಹಾಗೂ ಸ್ನೇಹಿತರೊಂದಿಗೆ ಒಡಗೂಡಿ ಆಹಾರ ಪದಾರ್ಥಗಳು, ಬಟ್ಟೆಗಳು, ಪಾತ್ರೆ ಜೀವನೋಪಾಯಕ್ಕಾಗಿ ಬೇಕಾಗಿರುವ ಅಗತ್ಯ ವಸ್ತುಗಳನ್ನು ಸಂಗ್ರಹಿಸಿರುವ ಸೋಮಶೇಖರ್ ಅವರು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ವಿತರಣೆ ಮಾಡಲಿದ್ದಾರೆ.