ಪರಿಹಾರ ಹಣ ಹಂಚಿಕೆಯಲ್ಲಿ ಗೋಲ್ಮಾಲ್ ಆರೋಪ: ರೈತರ ಕಣ್ಣಲ್ಲಿ ನೀರು - karnataka farmer struggle
ಅಂದು ಕೃಷ್ಣಾ ನದಿ ಉಕ್ಕಿಹರಿದಿದ್ದರಿಂದ ರೈತರು ಬೆಳೆದ ಬೆಳೆ ನೀರು ಪಾಲಾಗಿ ರೈತರು ಸಂಕಷ್ಟ ಅನುಭವಿಸುವಂತೆ ಮಾಡಿತ್ತು. ಇತ್ತ ಬೆಳೆದಯಿಲ್ಲದೇ, ಜಮೀನು ಹಾಳಾಗಿ ಅನ್ನದಾತರು ತೊಂದರೆ ಎದುರಿಸಿದ್ದರು. ಆಗ ಸರಕಾರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರಿಂದ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ, ಬೆಳೆ ನಷ್ಟ ಹೊಂದಿದ್ದ ರೈತನ ಕೈಗೆ ಸೇರಬೇಕಾದ ಹಣ ಅಧಿಕಾರಿಗಳ ಯಡವಟ್ಟಿನಿಂದ ಬೇರೊಬ್ಬರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗ್ತಿದೆ ಎಂಬ ದೂರುಗಳು ಕೇಳಿ ಬಂದಿದೆ.