ಬೆಲೆ ಸಿಗದೇ ಸೇವಂತಿ ಬೆಳೆ ನಾಶಗೊಳಿಸಿದ ರೈತ - ಹಾವೇರಿ ತಾಲೂಕಿನ ಹನುಮನಹಳ್ಳಿ
ಹಾವೇರಿ: ಸೋಂಪಾಗಿ ಬೆಳೆದಿದ್ದ ಸೇವಂತಿ ಮಾರಾಟವಾಗದೇ ತಾಲೂಕಿನ ಹನುಮನಹಳ್ಳಿ ಗ್ರಾಮದ ರೈತ ಚಂದ್ರಪ್ಪ ಸೇವಂತಿ ಹೂ ನೆಲಸಮಗೊಳಿಸಿದ್ದಾನೆ. ಸುಮಾರು 35 ಸಾವಿರ ರೂಪಾಯಿ ವೆಚ್ಚ ಮಾಡಿ ಚಂದ್ರಪ್ಪ ಒಂದು ಎಕರೆಯಲ್ಲಿ ಸೇವಂತಿ ಬೆಳೆದಿದ್ದ. ಲಾಕ್ಡೌನ್ ಹಿನ್ನೆಲೆ ಮಾರಾಟಕ್ಕೆ ಹೋದರೂ ಹೂವು ಕೇಳುವವರಿಲ್ಲ. ಇದರಿಂದ ಬೇಸತ್ತ ಚಂದ್ರಪ್ಪ ಒಂದು ಎಕರೆಯಲ್ಲಿ ಬೆಳೆದಿದ್ದ ಸೇವಂತಿ ಹೂವನ್ನ ಟ್ರ್ಯಾಕ್ಟರ್ ರೋಟರ್ ಮೂಲಕ ನೆಲಸಮ ಮಾಡಿದ್ದಾನೆ.