ರೈತನ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ: ಟ್ರ್ಯಾಕ್ಟರ್ನಿಂದ ಬೆಳೆ ನಾಶ
ಕೊರೊನಾ ಲಾಕ್ಡೌನ್ ಬಳಿಕ ಕೃಷಿ ಕ್ಷೇತ್ರದ ಮೇಲೆ ಇನ್ನಿಲ್ಲದ ಪರಿಣಾಮ ಉಂಟಾಗಿದೆ. ಈ ಹಿನ್ನೆಲೆ ರೈತರು ಬೆಳೆದಿರುವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯ ಜೊತೆಗೆ ಸೂಕ್ತ ಬೆಲೆ ಸಹ ಸಿಗದ ಪರಿಸ್ಥಿತಿ ಇದೆ. ರಾಜ್ಯದ ಹಲವೆಡೆ ರೈತರು ತಾವು ಬೆಳೆದ ಫಸಲನ್ನು ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಗದಗ್ನಲ್ಲಿ ಈರುಳ್ಳಿ ಬೆಳೆದ ರೈತ ಸರಿಯಾದ ಬೆಲೆ ಸಿಗದೆ ನೊಂದು ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡಿದ್ದಾನೆ.