ಟೊಮೆಟೊ ಮಾರಾಟ ಮಾಡಲಾಗದೆ ಟ್ರ್ಯಾಕ್ಟ್ರ್ ನಿಂದ ಬೆಳೆಯನ್ನೇ ಮಣ್ಣುಪಾಲು ಮಾಡಿದ ರೈತ - ಟ್ರ್ಯಾಕ್ಟ್ರ್ ನಿಂದ ಬೆಳೆ ನಾಶ ಮಾಡಿದ ರೈತ
ಕಲಬುರಗಿ: ಲಾಕ್ ಡೌನ್ ರೈತರು ಬೀದಿಗೆ ಬೀಳುವಂತೆ ಮಾಡಿದೆ. ಕೊರೊನಾ ಕರ್ಫ್ಯೂನಿಂದ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತನೋರ್ವ ಟೊಮೆಟೊ ಬೆಳೆ ನಾಶ ಮಾಡಿದ ಘಟನೆ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ. ಗಾಂದಪ್ಪ ವಾನೆಗಾಂವ್ ಎಂಬ ರೈತ ತಮ್ಮ ಎರಡು ಎಕರೆ ಹೊಲದಲ್ಲಿ ಟೊಮೆಟೊ ಬೆಳೆದಿದ್ದರು. ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದ ರೈತ ಗಾಂದಪ್ಪ, ಕಾಲ ಕಾಲಕ್ಕೆ ನೀರು ಹರಿಸಿ ರಸಗೊಬ್ಬರ ಸಿಂಪಡಿಸಿ ಭರಪೂರ ಬೆಳೆ ತೆಗೆದಿದ್ದರು. ಆದರೆ ಲಾಕ್ ಡೌನ್ ಕಾರಣದಿಂದಾಗಿ ಟೊಮೆಟೊ ಕಟಾವಿಗೆ ಜನರು ಬಾರದೆ, ಸಾಗಣೆಗೆ ವಾಹನದ ವ್ಯವಸ್ಥೆ ಇಲ್ಲದೆ ಹಾಗೂ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೆಲೆಯೂ ಇಲ್ಲದ ಕಾರಣ ಬೇಸತ್ತ ರೈತ ಬೆಳೆಯ ಮೇಲೆ ಟ್ರಾಕ್ಟರ್ ಹರಿಸಿ ನಾಶ ಮಾಡಿದ್ದಾರೆ.