ಕೊರೊನಾ ಭೀತಿ ಲೆಕ್ಕಿಸದೆ ಡಿಕೆಶಿ ಅಭಿನಂದಿಸಿದ ಅಭಿಮಾನಿಗಳು - ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ
ರಾಜ್ಯಾದ್ಯಂತ ಕೊರೊನಾ ಭೀತಿಯಿದ್ದರೂ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೇರಿದ ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಕೋರಲು ಅಭಿಮಾನಿಗಳು ತಂಡೋಪ ತಂಡವಾಗಿ ಆಗಮಿಸಿದ್ದರು. ಇಲ್ಲಿನ ಸದಾಶಿವನಗರದ ನಿವಾಸದ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದು ಪೇಟ, ಶಾಲು, ಹಾರ ಹಿಡಿದು ಅಭಿನಂದನೆ ಕೋರಲು ನಿಂತಿದ್ದರು. ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಆಗಮಿಸುತ್ತೇನೆ ಎಂದು ಅಭಿಮಾನಿಗಳಿಗೆ ಡಿಕೆಶಿ ಭರವಸೆ ನೀಡಿದರು.