ಶಶಿಕಲಾ ನಟರಾಜನ್ ಭೇಟಿ ಮಾಡಲು ರೆಸಾರ್ಟ್ನತ್ತ ಧಾವಿಸುತ್ತಿರುವ ಅಭಿಮಾನಿಗಳು - ದೇವನಹಳ್ಳಿಯ ಪ್ರೇಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿರುವ ಶಶಿಕಲಾ
ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ವಿಶ್ರಾಂತಿಗಾಗಿ ದೇವನಹಳ್ಳಿಯ ಪ್ರೇಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟ್ಗೆ ಬಂದಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಚಿನ್ನಮ್ಮ ಅಂತಾನೇ ಕರೆಸಿಕೊಳ್ಳುವ ಶಶಿಕಲಾರನ್ನು ಭೇಟಿ ಮಾಡುವ ಸಲುವಾಗಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರೆಸಾರ್ಟ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಶಶಿಕಲಾ ಆಪ್ತರಿಗೆ ಮಾತ್ರ ರೆಸಾರ್ಟ್ ಒಳಗೆ ಅವಕಾಶ ನೀಡಲಾಗಿದೆ. ರೆಸಾರ್ಟ್ ಒಳಗೆ ಪ್ರವೇಶ ನೀಡುವಂತೆ ಬೆಂಬಲಿಗರು ಪೊಲೀಸರನ್ನು ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸರು ರೆಸಾರ್ಟ್ ಒಳಗೆ ಪ್ರವೇಶ ನಿರಾಕರಿಸಿದ್ದಾರೆ.