ಕೊರೊನಾ ಮರೆತು ಸೆಲ್ಫಿಗಾಗಿ ಸಿದ್ದರಾಮಯ್ಯಗೆ ಮುಗಿಬಿದ್ದ ಅಭಿಮಾನಿಗಳು..! - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,
ಕೊಪ್ಪಳ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜಿಲ್ಲೆಯ ಕಾರಟಗಿಯಿಂದ ನಿರ್ಗಮಿಸುವ ವೇಳೆ ಕೊರೊನಾ ಸೋಂಕಿನ ಭೀತಿಯನ್ನು ಲೆಕ್ಕಿಸದೆ ಅಭಿಮಾನಿಗಳು ಮುಗಿಬಿದ್ದ ಘಟನೆ ನಡೆಯಿತು. ಮಸ್ಕಿ ವಿಧಾನಸಭಾ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ ಬಳಿಕ ಭಾನುವಾರ ರಾತ್ರಿ ಕಾರಟಗಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಕಾರಟಗಿಯಿಂದ ಹೊರಡುವ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಆಗ ಜನರನ್ನು ನಿಯಂತ್ರಿಸಲು ಅಂಗರಕ್ಷಕರು ಹರಸಾಹಸ ಪಡುವಂತಾಯಿತು.
TAGGED:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,