ದೇವರ ಗುಡಿಯಲ್ಲಿ ಶಾಸಕನ ಫೋಟೋ ಇಟ್ಟು ಪೂಜೆ: ವೈರಲ್ ಆಯ್ತು ವಿಡಿಯೋ - ಗಂಗಾವತಿಯಲ್ಲಿ ಶಾಸನ ಬಸವರಾಜ್ ಫೋಟೋಗೆ ಪೂಜೆ
ಕನಕಗಿರಿ ಕ್ಷೇತ್ರದ ಕಾರಟಗಿ ತಾಲೂಕಿನ ಎನ್ ಬಸವಣ್ಣ ಕ್ಯಾಂಪ್ನ ಯುವಕ ಮಲ್ಲಿಕಾರ್ಜುನ ನಾಯಕ ಎಂಬಾತ, ಶಾಸಕ ಬಸವರಾಜ ಫೋಟೋಗೆ ಪೂಜೆ ಸಲ್ಲಿಸಿ ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಮರು ಆಯ್ಕೆಯಾಗಬೇಕು. ಹಾಗೆಯೇ, ಮುಂದಿನ ಬಾರಿ ಮಂತ್ರಿಗಿರಿ ಸಿಗಬೇಕು ಎಂದು ಹರಕೆ ಹೊತ್ತಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.