ಕುಸಿಯುತ್ತಿದೆ BRTS ಯೋಜನೆಯ ಮೇಲ್ಸೇತುವೆ ತಡೆಗೋಡೆ: ದುರಸ್ತಿಗೆ ಆಗ್ರಹ - The barrier walls of the overpass have reached the point of collapse again
ಬಹುಕೋಟಿ ವೆಚ್ಚದ ಅವಳಿನಗರದ BRTS ಕಾಮಗಾರಿಯಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆಯ ತಡೆಗೋಡೆ ಮತ್ತೆ ಕುಸಿಯುವ ಹಂತ ತಲುಪಿದೆ. ನಿರಂತರ ಮಳೆಯಿಂದಾಗಿ ನವಲೂರು ಬಳಿಯ ಬ್ರಿಡ್ಜ್ನ ಭಾಗ ಕುಸಿಯುವ ಹಂತದಲ್ಲಿದ್ದು, ಸ್ಥಳೀಯರಲ್ಲಿ ಹಾಗೂ ವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬ್ರಿಡ್ಜ್ ಕಾಮಗಾರಿ ಕಳಪೆ ಎಂದು ಈಗಾಗಲೇ ಶಾಸಕ ಅರವಿಂದ್ ಬೆಲ್ಲದ ಸಿಎಂಗೆ ಪತ್ರ ಬರೆದಿದ್ದು, ಆದಷ್ಟು ಬೇಗ ಈ ಮೇಲ್ಸೇತುವೆ ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.