ಕರ್ನಾಟಕ

karnataka

ETV Bharat / videos

ಕಾವೇರಿ ಎಂಪೋರಿಯಂನಲ್ಲಿ ಬೇಲೂರು-ಹಳೇಬೀಡು ಮಾದರಿಯ ಕಲ್ಲಿನ ಕೆತ್ತನೆಗಳ ಪ್ರದರ್ಶನ! - Exhibition in Cauvery Emporium

By

Published : Jan 1, 2021, 5:04 PM IST

ಬೆಂಗಳೂರು : ಸಾಮಾನ್ಯವಾಗಿ ನಮ್ಮ ಕರ್ನಾಟಕದಲ್ಲಿ ಕಾವೇರಿ ಎಂಪೋರಿಯಂನಲ್ಲಿ ಕಟ್ಟಿಗೆ ಮತ್ತು ಪಂಚಲೋಹದಲ್ಲಿ ತಯಾರಿಸಿದಂತಹ ಕರಕುಶಲ ಮತ್ತು ಮನೆ ಅಲಂಕಾರಿಕ ವಸ್ತುಗಳು ದೊರೆಯುತ್ತಿದ್ದವು. ಆದರೆ, ಈ ಬಾರಿಯಿಂದ ಕಾವೇರಿ ಕರಕುಶಲ ಮಳಿಗೆಯಲ್ಲಿ ಕಲ್ಲಿನಿಂದ ತಯಾರಿಸಿದಂತಹ ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು ದೊರೆಯಲಿವೆ. ಹೊಸ ವರ್ಷದ ಅಂಗವಾಗಿ ಎಂಜಿ ರಸ್ತೆಯಲ್ಲಿ ಇರುವಂತಹ ಮುಖ್ಯ ಶಾಖೆಯಲ್ಲಿ ಕಲ್ಲಿನಿಂದ ತಯಾರಿಸಿದ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇದೇ ಮೊದಲ ಬಾರಿಗೆ ವಾಸ್ತುಶಿಲ್ಪಕ್ಕೆ ಹೆಸರಾದ ಹಂಪೆ,ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು ಮಾದರಿಯ ಹತ್ತು ಹಲವು ಕಲಾಕೃತಿಗಳನ್ನು ಕಾವೇರಿ ಎಂಪೋರಿಯಂ‌ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ ಅನ್ನೋದು ಇಲ್ಲಿ ವಿಶೇಷ.

ABOUT THE AUTHOR

...view details