ಅಬಕಾರಿ ದಾಳಿ.. ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 1.15 ಲಕ್ಷ ಮೌಲ್ಯದ ಮದ್ಯ ವಶ - excuse officers
ಕಾರವಾರ : ಗೋವಾ ರಾಜ್ಯದಿಂದ ಅಕ್ರಮವಾಗಿ ತಂದು ಮಾರಾಟ ಮಾಡಲು ದಾಸ್ತಾನು ಇಟ್ಟಿದ್ದ 1.15 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಾರೆವಾಡದ ಶಿವಾನಂದ ಹರಿಕಂತ್ರ ಎಂಬುವವರ ಮನೆಯಲ್ಲಿ ಮದ್ಯ ದಾಸ್ತಾನು ಮಾಡಿರುವ ಕುರಿತು ಖಚಿತ ಮಾಹಿತಿ ಪಡೆದ ಅಬಕಾರಿ ಪೊಲೀಸರು ದಾಳಿ ನಡೆಸಿ 69,800 ರೂ.ಮೌಲ್ಯದ 226 ಲೀಟರ್ ಐಎಂಎಲ್, 34 ಸಾವಿರ ಮೌಲ್ಯದ 131 ಲೀಟರ್ ಪೆನ್ನಿ ಹಾಗೂ 11.900 ರೂ.ಮೌಲ್ಯದ 59 ಲೀಟರ್ ಬಿಯರ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಶಿವಾನಂದ್ ತಲೆಮರಿಸಿಕೊಂಡಿದ್ದು, ಹುಡುಕಾಟ ನಡೆಸಲಾಗಿದೆ.