'ದಿ ಮ್ಯಾರೀಡ್ ವುಮನ್' ವೆಬ್ ಸರಣಿ ನಟಿಯರ ಎಕ್ಲ್ಕ್ಲೂಸಿವ್ ಸಂದರ್ಶನ - The Married Woman web series
'ದಿ ಮ್ಯಾರೀಡ್ ವುಮನ್' ವೆಬ್ ಸಿರೀಸ್ನ ನಟಿಯರಾದ ರಿಧಿ ದೋಗ್ರಾ ಮತ್ತು ಮೋನಿಕಾ ದೋಗ್ರಾ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದು, ಇದರಲ್ಲಿ ಅವರು ತಮ್ಮ ಪಾತ್ರಗಳ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಟಿ ಮೋನಿಕಾ ದೋಗ್ರಾ ತಮ್ಮ ಪಾತ್ರದ ವೈಶಿಷ್ಟ್ಯತೆ ಬಗ್ಗೆ ಹೇಳಿಕೊಂಡಿದ್ದು, ದಿ ಮ್ಯಾರೀಡ್ ವುಮನ್ ನಲ್ಲಿ ಅವರದ್ದು, ಹಠಮಾರಿ ಹೆಣ್ಣಿನ ಪಾತ್ರ, ನೋಡಲು ರೆಬಲ್ ಆಗಿ ಕಂಡರೂ ಮನದೊಳಗೆ ಬಹಳ ಭಾವ ಜೀವಿ. ಆಸ್ತಾ ಪಾತ್ರಧಾರಿಯಾಗಿರುವ ರಿಧಿ ದೋಗ್ರಾ ಇದರಲ್ಲಿ ರಿಧಿ ಇಂಗ್ಲಿಷ್ ಪ್ರೊಫೆಸರ್ ಸಹ ಆಗಿದ್ದು, ನೋಡಲು ಬಹಳ ಸಾಮಾನ್ಯ ಗೃಹಿಣಿಯಂತೆ ಕಂಡರೂ ಆಸ್ತಾ ಮಾತುಗಳು, ಸಂಭಾಷಣೆ ಬೇರೆಯವರೊಂದಿಗೆ ಮಾತನಾಡುವುದನ್ನೂ ಕೇಳುವಾಗ ಅದು ನಮ್ಮ ಬದುಕಿಗೆ ತೀರಾ ಹತ್ತಿರದ ಪಾತ್ರವೆನಿಸುತ್ತದೆ. ಪ್ರತಿಯೊಂದು ಹೆಣ್ಣಿನ ಒಳಗೂ ಒಬ್ಬಳು ಆಸ್ತಾ ನೆಲೆಸಿರುತ್ತಾಳೆ. ಆ ರೀತಿಯ ಪಾತ್ರ ನನ್ನದು ಎಂದು ರಿಧಿ ಹೇಳಿದ್ರು. ಮಾರ್ಚ್ 8 ರ ಮಹಿಳಾ ದಿನಾಚರಣೆಯಂದೇ ಈ ವೆಬ್ ಸಿರೀಸ್ ತೆರೆಕಾಣಲಿದೆ.