ಅಬಕಾರಿ ಇಲಾಖೆಯ ಮಿಂಚಿನ ಕಾರ್ಯಾಚರಣೆ.. ರಕ್ಷಣಾ ಇಲಾಖೆಗೆ ಸೇರಿದ ಅಕ್ರಮ ಮದ್ಯ ವಶ! - ಅಕ್ರಮ ಮದ್ಯ
ಬೆಂಗಳೂರು:ಅಬಕಾರಿ ಇಲಾಖೆ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ರಕ್ಷಣಾ ಇಲಾಖೆಗೆ ಸೇರಿದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಹಲಸೂರಿನಲ್ಲಿ ನಾರಾಯಣ್ ಎಂಬುವನ ಮನೆಯಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಸುಮಾರು ಒಂದೂವರೆ ಲಕ್ಷ ಮೌಲ್ಯದ 69 ಲೀಟರ್ ಮದ್ಯ ಶೇಖರಣೆ ಮಾಡಿಲಾಗಿತ್ತು. ಇದನ್ನು ಕಡಿಮೆ ಬೆಲೆಗೆ ಪಡೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಮದ್ಯದ ಜೊತೆ ರಕ್ಷಣಾ ಇಲಾಖೆಯ ಕೆಲವು ಕಾರ್ಡ್ಗಳ ಪತ್ತೆ ಮಾಡಿದ್ದು, ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.