ಕರ್ನಾಟಕ

karnataka

ETV Bharat / videos

ನಾಲ್ಕು ಬಾರಿ ಶಾಸಕನಾದವನು ಕಾಡಾ ಅಧ್ಯಕ್ಷನಾಗಲು ಸಾಧ್ಯವಿಲ್ಲ: ರಾಜು ಕಾಗೆ - ಕಾರ್ಯಕರ್ತರ ಬೆಂಬಲ

By

Published : Oct 10, 2019, 10:12 PM IST

ಚಿಕ್ಕೋಡಿ: ನಾಲ್ಕು ಬಾರಿ ಶಾಸಕನಾದವನು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆ (ಕಾಡಾ) ಅಧ್ಯಕ್ಷನಾಗಲು ಸಾಧ್ಯವಿಲ್ಲ. ಪಕ್ಷದಿಂದ ಟಿಕೆಟ್​ ಕೊಟ್ಟರೆ ಸ್ಪರ್ಧಿಸಿ, ಇಲ್ಲವಾದರೆ ಬೇರೆ ಪಕ್ಷದಿಂದ ಚುನಾವಣೆಗೆ ನಿಂತುಕೊಳ್ಳಿ. ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಶ್ರೀಮಂತ ಪಾಟೀಲ್​ಗೆ (ಅನರ್ಹ ಶಾಸಕ) ಬೆಂಬಲ ನೀಡುವುದಿಲ್ಲ ಎಂದು ಮಾಜಿ ಶಾಸಕ‌ ಭರಮಗೌಡ (ರಾಜು) ಕಾಗೆ ಅವರು 'ಈಟಿವಿ ಭಾರತ್​​​'ಗೆ ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details