ಘಟಿಕೋತ್ಸವದಲ್ಲಿ ಮಾಸ್ಕ್ ಹಾಕದ ಹೆಚ್.ಕೆ. ಪಾಟೀಲ್: ಕೋವಿಡ್ ನಿಯಮ ಗಾಳಿಗೆ ತೂರಿದ ಮಾಜಿ ಸಚಿವ - ಪಂಚಾಯತ್ ರಾಜ್ ವಿವಿ ಘಟಿಕೋತ್ಸವ
ಗದಗ : ಮಾಸ್ಕ್ ಹಾಕದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋವಿಡ್ ನಿಯಮ ಉಲ್ಲಂಘಿಸುವ ಮೂಲಕ ಮಾಜಿ ಸಚಿವ ಹೆಚ್.ಜೆ ಪಾಟೀಲ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಿ ಹೆಚ್. ಕೆ ಪಾಟೀಲ್ ಅವರಿಗೆ ವಿವಿ ಡಾಕ್ಟರೇಟ್ ಪದವಿ ನೀಡಲು ಆಹ್ವಾನಿಸಿತ್ತು. ಆದರೆ, ಈ ಕಾರ್ಯಕ್ರಮದಲ್ಲೇ ಮಾಸ್ಕ್ ಹಾಕದೇ ಹೆಚ್.ಕೆ. ಪಾಟೀಲ್ ತಮ್ಮ ಸಾಮಾಜಿಕ ಬದ್ದತೆ ಮರೆತ್ತಿದ್ದರು. ಪಾಟೀಲ್ ಜೊತೆಗ ಇನ್ನೂ ಕೆಲ ಗಣ್ಯರು ಮಾಸ್ಕ್ ಹಾಕದಿರುವುದು ಕಂಡು ಬಂತು.