ಕರ್ನಾಟಕ

karnataka

ETV Bharat / videos

ಹಾಸನದ ಅಧಿಕಾರಿಗಳು ಕೆಲ ರಾಜಕಾರಣಿಗಳ ಕೆಳಗೆ ಜೀತ ಪದ್ಧತಿಯಲ್ಲಿಯೇ ಇದ್ದಾರೆ: ಎ ಮಂಜು - ಜಿಲ್ಲಾ ಪಂಚಾಯಿತಿ ಚುನಾವಣೆ ಬಗ್ಗೆ ಎ ಮಂಜು ಪ್ರತಿಕ್ರಿಯೆ

By

Published : Feb 23, 2021, 9:21 AM IST

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಜಿಲ್ಲೆಯ ಕೆಲವು ಅಧಿಕಾರಿಗಳು ಇನ್ನು ಕೆಲವು ರಾಜಕಾರಣಿಗಳ ಕೆಳಗೆ ಜೀತ ಪದ್ಧತಿಯಲ್ಲಿಯೇ ಇದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಗಂಭೀರ ಆರೋಪ ಮಾಡಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್​ ಮತ್ತು ತಾಲೂಕು ಪಂಚಾಯತ್​ ಚುನಾವಣೆಯ ಹಿನ್ನೆಲೆ ಕ್ಷೇತ್ರ ಮರುವಿಂಗಡಣೆಯಾಗುತ್ತಿದ್ದು, ರಾಜಕೀಯದ ಕೆಲವು ನಾಯಕರುಗಳ ಒತ್ತಡಕ್ಕೆ ಮಣಿದು ಜಿಲ್ಲೆಯ ಅಧಿಕಾರಿಗಳು ಕೆಲಸವನ್ನು ಮಾಡುತ್ತಿರುವುದನ್ನು ನೋಡಿದ್ರೆ, ಅಧಿಕಾರಿಗಳು ಇನ್ನೂ ಜೀತ ಪದ್ಧತಿಯಲ್ಲಿ ಇದ್ದಾರೆ ಎಂದು ಭಾಸವಾಗುತ್ತಿದೆ ಎಂದ್ರು.

ABOUT THE AUTHOR

...view details