ಟ್ರಬಲ್ ಶೂಟರ್ ನೂರಕ್ಕೆ ನೂರಷ್ಟು ಈ ಕೇಸಿನಿಂದ ಹೊರ ಬರ್ತಾರೆ.. ಮಾಜಿ ಮೇಯರ್ ಪದ್ಮಾವತಿ - ಬೆಂಗಳೂರು
ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನ ಹೇಗಾದರೂ ಮಾಡಿ ರಾಜಕೀಯವಾಗಿ ಮುಗಿಸೋದಕ್ಕೆ ತಂತ್ರ ಹೆಣೆಯಲಾಗುತ್ತಿದೆ. ರಾಜಕೀಯ ದುರುದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆ. ಆದರೆ, ಕಾನೂನು ಚೌಕಟ್ಟಿನಲ್ಲಿಯೇ ಹೋರಾಟ ನಡೆಸಿ, ಇಡಿ ಕೇಸಿನಿಂದ ನೂರಕ್ಕೆ ನೂರಷ್ಟು ಹೊರ ಬರ್ತಾರೆ ಅಂತಾ ಮಾಜಿ ಮೇಯರ್ ಪದ್ಮಾವತಿ ಹೇಳಿದ್ದಾರೆ. ಇಡಿ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಡಿಕೆಶಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಈಟಿವಿ ಭಾರತ ಪ್ರತಿನಿಧಿಗೆ ಜತೆಗೆ ತಮ್ಮ ನಾಯಕನ ಕುರಿತಂತೆ ಮಾತಾಡಿದ್ದಾರೆ.