ಇವಿಎಂ,ಎನ್ಆರ್ಸಿ,ಸಿಎಎ ಕಾಯ್ದೆ ಕೈಬಿಡಲು ಒತ್ತಾಯ:ಬಹುಜನ ಕ್ರಾಂತಿ ಮೋರ್ಚಾದಿಂದ ಪರಿವರ್ತನಾ ಯಾತ್ರೆ
ರಾಯಚೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣ, ನಗರಸಭೆ ಮೂಲಕ ಮಹಿಳಾ ಸಮಾಜ್ ಮೈದಾನದವರೆಗೆ ಬಹುಜನ ಕ್ರಾಂತಿ ಮೋರ್ಚಾದಿಂದ ಪರಿವರ್ತನಾ ಯಾತ್ರೆ ನಡೆಯಿತು. ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ವಾಮನ್ ಮೇಶ್ರಾಮ್, ಧರ್ಮದ ಆಧಾರದ ಮೇಲೆ ದೇಶದ ನಾಗರಿಕರನ್ನು ಬೇರ್ಪಡಿಸಲು ಉದ್ದೇಶಪೂರ್ವಕವಾಗಿ ಸಿ.ಎ.ಎ ಕಾಯ್ದೆ ಜಾರಿಗೆ ತರಲಾಗಿದೆ. ಕೇಂದ್ರಸರ್ಕಾರ ಎನ್ಆರ್ಸಿ,ಎನ್ಪಿಆರ್ ಮೂಲಕ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.