ನ್ಯಾಯಾಲಯದ ತೀರ್ಪನ್ನ ಎಲ್ಲರೂ ಗೌರವಿಸಿ, ಶಾಂತಿ ಕಾಪಾಡಬೇಕು: ಡಿಕೆಶಿ - Everyone should Respect of the court verdict on Ayodhya issue: DKS
ಬೆಂಗಳೂರು: ಕೋರ್ಟ್ ತೀರ್ಪನ್ನ ಎಲ್ಲರೂ ಗೌರವಿಸಬೇಕು. ಸಮಾಜದಲ್ಲಿ ಎಲ್ಲರೂ ಶಾಂತಿಯನ್ನ ಕಾಪಾಡಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಯೋಧ್ಯೆ ತೀರ್ಪು ವಿಚಾರದ ಬಗ್ಗೆ ನಾನೀಗ ಮಾತಾಡಲ್ಲ. ಕೆಪಿಸಿಸಿ ತುರ್ತು ಸಭೆ ಇದೆ. ಸಭೆಗೆ ಹೋಗ್ತಿದ್ದೀನಿ. ಆದ್ರೆ ಎಲ್ಲ ಜನರು ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಕೆಪಿಸಿಸಿ ತುರ್ತು ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ನಂತರ ಮಾತನಾಡ್ತೇನೆ ಎಂದರು.