ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾನುವಾರು ಹತ್ಯೆ ನಿಷೇಧ ಕಾಯ್ದೆಯಾಗಿ ತಿರುಚಲಾಗಿದೆ: ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು: ಕೃಷಿ ವಿರೋಧಿ ಕಾಯ್ದೆ ಹಾಗೂ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆ ಕುರಿತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, 1964ರ ಕಾಯ್ದೆ ಪ್ರಕಾರ ಹಾಲು ಕೊಡುವಂತಹ ಹಸುಗಳನ್ನು ಕೊಳ್ಳುವಂತಿಲ್ಲ. ಆದ್ರೆ ಈಗ ಇವರು ಜಾರಿಗೆ ತಂದಿರೋ ಕಾಯ್ದೆ ಎಲ್ಲಾ ತರದ ಹಸುಗಳನ್ನು, ಗೊಡ್ಡು ಹಸುಗಳನ್ನು ಹಾಗೂ ಕೋಣಗಳನ್ನು ಕೊಳ್ಳುವಂತಿಲ್ಲ. ಜಾನುವಾರು ನಿಷೇಧ ಕಾಯ್ದೆಯನ್ನು ಕೂಡಲೇ ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.