ಬಾಪೂಜಿಗೆ ಈಟಿವಿ ಭಾರತದಿಂದ ವಿಡಿಯೋ ನಮನ... ಗಾಂಧಿವಾದಿಯಿಂದ ಶ್ಲಾಘನೆ - ವೈಷ್ಣವ ಜನತೋ ವಿಡಿಯೋ
ಬೆಂಗಳೂರು: ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ದೇಶದ ಪ್ರಖ್ಯಾತ ಗಾಯಕ, ಗಾಯಕಿಯರಿಂದ 'ವೈಷ್ಣವ ಜನತೋ..' ಗೀತೆಯನ್ನು ಹಾಡಿಸಿರುವ ಈಟಿವಿ ಭಾರತದ ಕಾರ್ಯವನ್ನು ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಪ್ರಸನ್ನ ಹಾಗೂ ಸಾಹಿತಿ ವಿಜಯಮ್ಮ ಅವರು ಶ್ಲಾಘಿಸಿದರು. ಈ ವಿಡಿಯೋ ನಮನ ತುಂಬಾ ಚೆನ್ನಾಗಿದೆ. ಅಹಿಂಸೆಯನ್ನು ಸಾರುವ ಈ ಗೀತೆ ಗಾಂಧೀಜಿಯ ಬಹಳ ಇಷ್ಟದ ಹಾಡು ಎಂದು ಪ್ರಸನ್ನ ಅವರು ತಿಳಿಸಿದರು.