ಸಿಎಂ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ: ಕಷ್ಟದ ದಿನಗಳನ್ನು ನೆನೆದು ಗದ್ಗದಿತರಾದ ಆರ್. ಶಂಕರ್! - ಆರ್. ಶಂಕರ್ಗೆ ವಿಧಾನಪರಿಷತ್ ಟಿಕೆಟ್
ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಅಜ್ಞಾತವಾಸದಲ್ಲಿದ್ದ ಮಾಜಿ ಸಚಿವ ಆರ್.ಶಂಕರ್ಗೆ ಕಡೆಗೂ ವನವಾಸದಿಂದ ಮುಕ್ತಿ ಸಿಕ್ಕಿದೆ. ಬಿಜೆಪಿಯಿಂದ ವಿಧಾನ ಪರಿಷತ್ ಟಿಕೆಟ್ ಪಡೆದುಕೊಳ್ಳುವಲ್ಲಿ ಶಂಕರ್ ಸಫಲರಾಗಿದ್ದಾರೆ. ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡುತ್ತಾ ಒಂದು ವರ್ಷಲ್ಲಿ ಕಳೆದ ಕಷ್ಟದ ದಿನಗಳನ್ನು ನೆನೆದು ಗದ್ಗದಿತರಾದರು.