'ಈಶ್ವರಾರ್ಪಣ' ಸಂಸ್ಮರಣಾ ಗ್ರಂಥ ಬಿಡುಗಡೆಗೊಳಿಸಿದ ಡಾ. ಡಿ.ವೀರೇಂದ್ರ ಹೆಗ್ಗಡೆ - ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವರ ಸನ್ನಿಧಾನದಲ್ಲಿ ಗ್ರಂಥ ಬಿಡುಗಡೆ
ಖ್ಯಾತ ಪತ್ರಕರ್ತ ಎ.ಈಶ್ವರಯ್ಯ ಅವರ ಸಂಸ್ಮರಣಾ ಗ್ರಂಥ ‘ಈಶ್ವರಾರ್ಪಣ'ವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು. ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹರಿಕಾರರಾಗಿ ದುಡಿದಿದ್ದ ಖ್ಯಾತನಾಮರ ಸಂಸ್ಮರಣ ಗ್ರಂಥದ ಕುರಿತಾಗಿ ಪುಸ್ತಕದ ಸಂಪಾದಕರಾದ ಪ್ರೊ. ವಿ.ಅರವಿಂದ ಹೆಬ್ಬಾರ್ ಈ ಸಂದರ್ಭ ವಿವರಗಳನ್ನು ನೀಡಿದರು.