ಗಡಿಗ್ರಾಮದಲ್ಲಿ ಎರಿತಾತ ಮುತ್ತಿನ ಪಲ್ಲಕ್ಕಿ ಉತ್ಸವದ ಸಡಗರ - ಸಂಭ್ರಮ - ಚೆಳ್ಳಗುರ್ಕಿ ಗ್ರಾಮದ ಆರಾಧ್ಯದೈವ ಎರಿತಾತನವರ ದೇಗುಲ
ಬಳ್ಳಾರಿ: ಬಳ್ಳಾರಿ ತಾಲೂಕಿನ ಗಡಿಭಾಗದ ಚೆಳ್ಳಗುರ್ಕಿ ಗ್ರಾಮದ ಆರಾಧ್ಯದೈವ ಎರಿತಾತನವರ ದೇಗುಲದ ಇಂದು ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವವು ಅದ್ಧೂರಿಯಾಗಿ ನಡೆಯಿತು. ಎರಿತಾತನವರ ದೇಗುಲದಲ್ಲಿ ಪಂಚಕಳಸ, ದಶ ದೀಪಾಲಂಕಾರ ಕಳಸ, ಏಕಾದಶಿ ರುದ್ರ ಕಳಸ ನಡೆಯಿತು. ಎರಿತಾತ ಮೂರ್ತಿಗೆ ವಿಶೇಷ ಅಭಿಷೇಕ, ಅರ್ಚನೆ, ದೀಪಾರಾಧನೆ, ಅಷ್ಠೋತ್ತರ ಶಂಖಾಭಿಷೇಕ ಪೂಜೆ ಕೂಡ ನಡೆಯಿತು.