ವಿದ್ಯುತ್ ದುರಸ್ತಿಗೆ ಹೆಗಲ ಮೇಲೆ ಜೆಸ್ಕಾಂ ಸ್ನೇಹಿತನ ಹೊತ್ತು ಸಾಗಿದ ನೌಕರ - Jescom
ಮಳೆಗಾಲದಲ್ಲಿ ವಿದ್ಯುತ್ ದುರಸ್ತಿಗಾಗಿ ಪವರ್ ಮ್ಯಾನ್ಗಳು ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಬಳಿ ಹೊಲದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆ ಜೆಸ್ಕಾಂ ನೌಕರರಾದ ಶರಣಬಸವ ಮತ್ತು ಸಿದ್ದಯ್ಯ ಇಬ್ಬರು ವಿದ್ಯುತ್ ದುರಸ್ತಿಗಾಗಿ, ಒಬ್ಬರ ಬೆನ್ನ ಮೇಲೆ ಒಬ್ಬರು ಹತ್ತಿ ಹೊಲದಲ್ಲಿ ತೆರಳಿದ್ದಾರೆ. ಹೊಲದಲ್ಲಿ ಕೆಸರು ಮಿಶ್ರಿತ ನೀರು ನಿಂತಿದ್ದ ಕಾರಣ ವಿದ್ಯುತ್ ಕಂಬ ಏರುವಾಗ ಅವಘಡ ಸಂಭವಿಸಬಾರದು ಎಂದು ಈ ರೀತಿ ಮಾಡಲಾಗಿದೆ. ಸದ್ಯ ಇವರಿಬ್ಬರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.