ಧನುರ್ ಲಗ್ನದಲ್ಲಿ ಗಜಪಡೆ ಅರಮನೆಗೆ ಪ್ರವೇಶ: ಡಿಸಿಎಫ್ ಅಲೆಕ್ಸಾಂಡರ್ - Elephants to Mysore Palace
ಮೈಸೂರು: ಶುಭ ಧನುರ್ ಲಗ್ನದಲ್ಲಿ ಇಂದು ಗಜಪಡೆ ಅರಮನೆ ಪ್ರವೇಶ ಮಾಡಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿಎಫ್ ಅಲೆಕ್ಸಾಂಡರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಸರಳ ದಸರಾ ಹಿನ್ನೆಲೆ ಅಭಿಮನ್ಯು ನೇತೃತ್ವದ ಗಜಪಡೆಗೆ ನಿನ್ನೆ ವೀರನಹೊಸಹಳ್ಳಿಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಮಾವುತರು ಹಾಗೂ ಕಾವಾಡಿಗಳಿಗೆ ಗೌರವ ಸೂಚಿಸಿ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.