ಕರ್ನಾಟಕ

karnataka

ETV Bharat / videos

ಅರಮನೆ ಆವರಣದಲ್ಲಿ‌ ರಿಲ್ಯಾಕ್ಸ್ ಮೂಡಿನಲ್ಲಿರುವ ಗಜಪಡೆ - elephants news

By

Published : Oct 3, 2020, 4:54 PM IST

ಎರಡು ದಿನಗಳಿಂದ ಸಾಂಸ್ಕೃತಿಕ ನಗರಿಯಲ್ಲಿರುವ ಗಜಪಡೆ ಇಂದು ವಿಶ್ರಾಂತಿಯಲ್ಲಿವೆ. ಹುಣಸೂರು ತಾಲೂಕಿನ‌ ವೀರನಹೊಸಳ್ಳಿ ಗ್ರಾಮದಲ್ಲಿ ಗಜಪಯಣ ಮುಗಿಸಿ, ಗುರುವಾರ ಅರಣ್ಯ ಭವನಕ್ಕೆ ಆಗಮಿಸಿದ ಗಜಪಡೆಗೆ ಶುಕ್ರವಾರ ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಇಂದಿನಿಂದ ಆನೆಗಳಿಗೆ ತಾಲೀಮು ಆರಂಭಿಸಬೇಕಾಗಿತ್ತು. ಆದರೆ, ಮಾವುತರು ಹಾಗೂ ಕಾವಾಡಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕಿರೋದ್ರಿಂದ ಆನೆಗಳ ತಾಲೀಮಿಗೆ ಬ್ರೇಕ್ ಬಿದ್ದಿದೆ. ಭಾನುವಾರದಿಂದ ಅರಮನೆ ಆವರಣದಲ್ಲಿಯೇ ಗಜಪಡೆ ತಾಲೀಮು ನಡೆಯಲಿದೆ. ಎರಡು ದಿನಗಳಿಂದ ವಿಶ್ರಾಂತಿಯಲ್ಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡ ನಾಳೆಯಿಂದ ತಾಲೀಮಿಗೆ ಅಣಿಯಾಗಲಿದೆ.

ABOUT THE AUTHOR

...view details