ನಾಡಿಗೆ ಲಗ್ಗೆ ಇಟ್ಟ ಕಾಡಾನೆ ಹಿಂಡು: ಕಾಡಿಗಟ್ಟಲು ಅರಣ್ಯಾಧಿಕಾರಿಗಳ ಹರಸಾಹಸ - ಚಿಕ್ಕಹೊಳೆ ಗಡಿಭಾಗದಲ್ಲಿ ಕಾಡು ಆನೆ ಹಾವಳಿ
ಚಾಮರಾಜನಗರ: 10 ಕ್ಕೂ ಹೆಚ್ಚು ಕಾಡಾನೆ ಹಿಂಡು ಜಿಲ್ಲೆಯ ಚಿಕ್ಕಹೊಳೆ ಗಡಿಭಾಗದಲ್ಲಿ ಕಂಡುಬಂದಿದ್ದು, ಹತ್ತಾರು ಎಕರೆ ಜಮೀನಿನಲ್ಲಿ ಬೆಳೆ ನಾಶ ಮಾಡಿವೆ. ಸ್ಥಳಕ್ಕೆ ತಮಿಳುನಾಡು ಅರಣ್ಯಾಧಿಕಾರಗಳು ದೌಡಾಯಿಸಿ ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.