ಅಭಿಮನ್ಯು ಮುಂದೆ ಮಂಡಿಯೂರಿದ ಪುಂಡಾನೆ: ಅಧಿಕಾರಿಗಳ ನಿದ್ದೆಗೆಡಿಸಿದ್ದ ಆನೆ ಸೆರೆ - ಕೃಷ್ಣ ಆನೆ
ಚಿತ್ರದುರ್ಗ: ನಾಲ್ಕು ದಿನಗಳಿಂದ ಅರಣ್ಯಾಧಿಕಾರಿಗಳನ್ನು ಸಾಕು ಸಾಕು ಎನ್ನುವಂತೆ ಮಾಡಿದ್ದ ಪುಂಡಾನೆಯು ಅಭಿಮನ್ಯುವಿನ ಮುಂದೆ ಮಂಡಿಯೂರಿದೆ. ಈ ಪುಂಡಾನೆ ಭದ್ರಾ ವನ್ಯಧಾಮದಿಂದ ಚಿತ್ರದುರ್ಗ ಕುರುಮರಡಿಕೆರೆ ಸಮೀಪದ ಅರಣ್ಯಪ್ರದೇಶದಲ್ಲಿ ಬೀಡುಬಿಟ್ಟಿತ್ತು. ಅದನ್ನು ಸೆರೆ ಹಿಡಿಯುವ ಅಧಿಕಾರಿಗಳ ಪ್ರಯತ್ನ ವಿಫಲವಾಗಿತ್ತು. ಆದರೆ ಕಾರ್ಯಚರಣೆಗೆ ಎಂಟ್ರಿ ಕೊಟ್ಟ ಅಭಿಮನ್ಯು ಮುಂದೆ ಪುಂಡಾನೆ ಮಂಡಿಯೂರಿದ್ದು ಅರಣ್ಯದಂಚಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.