ಮೈಸೂರು: ಕಾಂಪೌಂಡ್ ದಾಟಿ ಶಾಲೆಗೆ ನುಗ್ಗಿದ ಒಂಟಿ ಸಲಗ.. ವಿದ್ಯಾರ್ಥಿಗಳು, ಶಿಕ್ಷಕರು ಕಕ್ಕಾಬಿಕ್ಕಿ! - ಹುಣಸೂರು ತಾಲೂಕಿನ ನಾಗಪುರ ಹಾಡಿಯ ಸರ್ಕಾರಿ ಪ್ರೌಢಶಾಲೆಗೆ ನುಗ್ಗಿದ ಆನೆ
ಮೈಸೂರು: ಕಾಂಪೌಂಡ್ ಹಾರಿ ವಿದ್ಯಾರ್ಥಿಗಳು ಶಾಲೆಗೆ ಬಂಕ್ ಮಾಡುವುದನ್ನು ನೋಡಿದ್ದೇವೆ. ಆದ್ರೆ, ಆನೆಯೇ ಕಾಂಪೌಂಡ್ ದಾಟಿ ಶಾಲೆಗೆ ನುಗ್ಗಿರುವ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ. ನಾಗಪುರ ಹಾಡಿಯ ಸರ್ಕಾರಿ ಪ್ರೌಢಶಾಲೆಗೆ ಕಾಂಪೌಂಡ್ ದಾಟಿ ಆನೆ ಶಾಲೆಯ ಆವರಣಕ್ಕೆ ನುಗ್ಗಿದೆ. ಇದನ್ನು ನೋಡಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಿರುಚಾಡಿದ್ದಾರೆ. ನಾಗಪುರ, ಪಿಂಜಳ್ಳಿ ಗ್ರಾಮದಲ್ಲಿ ಮೂರು ಆನೆಗಳು ಬೀಡು ಬಿಟ್ಟಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸಮೀಪದಲ್ಲಿಯೇ ಗ್ರಾಮಗಳು ಇರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.