ಗಿರಿನಗರದಲ್ಲಿ ಆನೆ ಮತ್ತೆ ಪ್ರತ್ಯಕ್ಷ: ಮುಂದುವರಿದ ಕಾರ್ಯಾಚರಣೆ - ಧಾರವಾಡ
ಧಾರವಾಡ: ಕಾಡಿನಿಂದ ನಾಡಿಗೆ ಬಂದಿದ್ದ ಗಜರಾಜ ಇಂದು ಮತ್ತೆ ಧಾರವಾಡದಲ್ಲಿ ಪ್ರತ್ಯಕ್ಷಗೊಂಡಿದೆ. ನಿನ್ನೆ ಕರ್ನಾಟಕ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್ ನಲ್ಲಿ ಪತ್ತೆಯಾಗಿದ್ದ ಆನೆ, ಕಾಡಿಗೆ ದಾರಿ ಕಾಣದೇ ಕೆಲವೆಡೆ ಸುತ್ತಾಡಿದೆ. ನಿನ್ನೆ ರಾತ್ರಿಯಿಡಿ ಆನೆ ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಆದರೆ, ಬೆಳಗಿನ ಸಮಯದಲ್ಲಿ ಧಾರವಾಡ ತಾಲೂಕಿನ ತಡಸಿನಕೊಪ್ಪದ ಅರಣ್ಯ ಪ್ರದೇಶದಲ್ಲಿ ಪ್ರತ್ಯಕ್ಷಗೊಂಡಿದೆ. ಬಳಿಕ ಸೋಮೇಶ್ವರ ದೇವಸ್ಥಾನ, ಗಿರಿನಗರ ಬಡಾವಣೆಯಲ್ಲಿ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದು, ನಗರದತ್ತ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ.