ಮೈಸೂರಿನಲ್ಲಿ ತಾಯಿಯಿಂದ ಬೇರ್ಪಟ್ಟ ಮರಿಯಾನೆ ರಕ್ಷಣೆ - Nagarahole National Park
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಹಳ್ಳಿ ಬಳಿಯ ಹನ್ನೂರು ಹೊಸಹಳ್ಳಿ ಬಳಿ ಕಾಡಾನೆಗಳು ಆಹಾರ ಅರಸಿ ಮರಿಗಳೊಂದಿಗೆ ನಾಡಿಗೆ ಬರುವುದುಂಟು. ಇವುಗಳು ಹೀಗೆ ಬಂದ ಸಂದರ್ಭದಲ್ಲಿ ಮರಳಿ ಕಾಡಿಗೆ ಹೋಗುವಾಗ ಆನೆ ಮರಿಯೊಂದು ತಪ್ಪಿಸಿಕೊಂಡಿದೆ. ಇದನ್ನು ಅರಣ್ಯ ಇಲಾಖೆಯವರು ಹಾಗೂ ಗ್ರಾಮಸ್ಥರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಆದರೆ ಈ ಆನೆ ಮರಿ ತಾಯಿಯೊಂದಿಗೆ ಸೇರಿಕೊಳ್ಳದೆ ಪುನಃ ನಾಡಿಗೆ ಬಂದಿದೆ. ಈ ಆನೆ ಮರಿಯನ್ನು ಮತ್ತೆ ಅರಣ್ಯ ಸಿಬ್ಬಂದಿ ರಾತ್ರಿ ಕಾಡಿಗೆ ಬಿಟ್ಟಿದ್ದಾರೆ. ಸಾಮಾನ್ಯವಾಗಿ ತಪ್ಪಿಸಿಕೊಂಡ ಮರಿಯಾನೆಗಳನ್ನು ಮನುಷ್ಯರು ಮುಟ್ಟಿದರೆ ಪುನಃ ಅವರುಗಳು ಗುಂಪಿಗೆ ಸೇರಿಸಿಕೊಳ್ಳುವುದಿಲ್ಲ. ಆದ್ದರಿಂದ ಈ ರೀತಿ ಆಗಿರಬಹುದೆಂದು ಅರಣ್ಯ ಅಧಿಕಾರಿಯೊಬ್ಬರು ಹೇಳುತ್ತಾರೆ.