ಅರಣ್ಯ ಇಲಾಖೆ ವಾಹನ ಹಿಂಬಾಲಿಸಿದ ಒಂಟಿ ಸಲಗ.. ವಿಡಿಯೋ ನೋಡಿ.. - ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶ
ಅರಣ್ಯ ಇಲಾಖೆ ಅಧಿಕಾರಿಗಳು ವಾಹನದಲ್ಲಿ ಸಂಚರಿಸುವಾಗ ಕಾಡಾನೆಯೊಂದು ವಾಹನದ ಕಡೆಗೆ ನುಗ್ಗಿದ ಘಟನೆ ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯಾಧಿಕಾರಿಗಳು ಜೀಪ್ನಲ್ಲಿ ವೀರನಹೊಸಹಳ್ಳಿ ಕುಟ್ಟಾ ಮಾರ್ಗವಾಗಿ ಸಂಚರಿಸುವ ಸಂದರ್ಭ, ರಸ್ತೆ ಮಧ್ಯೆ ಕಾಡಾನೆ ನಿಂತಿದ್ದು, ಈ ಆನೆಯನ್ನು ನೋಡಿದ ಸಿಬ್ಬಂದಿ ದೂರದಲ್ಲೇ ಜೀಪ್ ನಿಲ್ಲಿಸಿದರು. ಈ ವೇಳೆ ಕಾಡಾನೆ ಸೊಂಡಿಲು ಆಡಿಸುತ್ತ ವಾಹನದ ಕಡೆ ನುಗ್ಗಿ ಬಂದಿದ್ದು, ತಕ್ಷಣ ಚಾಲಕ ಹಿಮ್ಮುಖವಾಗಿ ಜೀಪ್ ಚಲಾಯಿಸಿದ್ದಾರೆ. ಆದರೂ ಸ್ವಲ್ಪ ದೂರ ವಾಹನದ ಕಡೆಗೆ ಕಾಡಾನೆ ಧಾವಿಸಿ ನಂತರ ಕಾಡಿನ ಕಡೆಗೆ ಓಡಿದೆ.