ಕೈಯಲ್ಲಿ ಪ್ರಾಣ, ಅರ್ಧ ಕಿ.ಮೀ ಹಿಮ್ಮುಖ ಚಾಲನೆ... ಗಜರಾಜನ ದಾಳಿಗೆ ಅರಣ್ಯ ಸಿಬ್ಬಂದಿ ವಾಹನ ಜಖಂ: ವಿಡಿಯೋ - Elephant attack on Forest vehicle,
ಕಾಡಿನಿಂದ ಹೊರ ಬಂದಿದ್ದ ಒಂಟಿ ಸಲಗವನ್ನು ಮತ್ತೆ ಕಾಡಿಗೆ ಸೇರಿಸಲು ಹೋದಾಗ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಮೈಸೂರಿನ ವೀರನಹೊಸಹಳ್ಳಿ ಬಳಿ ನಡೆದಿದೆ. ನಿನ್ನೆ ರಾತ್ರಿ ಕಾಡಿನಿಂದ ಒಂಟಿ ಸಲಗವೊಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವದ ರಸ್ತೆಯ ವೀರನಹೊಸಹಳ್ಳಿಯ ಕಾಡಂಚಿನ ಗ್ರಾಮದ ಬಳಿ ಕಾಣಿಸಿಕೊಂಡಿತ್ತು. ಈ ಒಂಟಿ ಸಲಗವನ್ನು ಅರಣ್ಯ ಇಲಾಖೆಯ ವಾಹನದಲ್ಲಿ ಕಾಡಿಗೆ ಅಟ್ಟಲು ಪ್ರಯತ್ನಿಸಿಲಾಗಿತ್ತು. ಅರಣ್ಯ ಸಿಬ್ಬಂದಿ ಇದ್ದ ವಾಹನದ ಮೇಲೆ ದಿಢೀರ್ ದಾಳಿ ನಡೆಸಿದ ಸಲಗಕ್ಕೆ ಹೆದರಿದ ಸಿಬ್ಬಂದಿ ವಾಹನವನ್ನು ಅರ್ಧ ಕಿಲೋಮೀಟರ್ ನಷ್ಟು ಹಿಮ್ಮುಖವಾಗಿವೇ ಓಡಿಸಿದ್ದಾರೆ. ಸಲಗ ವಾಹನದ ಮುಂಭಾಗಕ್ಕೆ ಗುದ್ದಿದೆ. ಪರಿಣಾಮ ವಾಹನದ ಮುಂಭಾಗ ಜಖಂಗೊಂಡು ಗ್ಲಾಸ್ ಪುಡಿ ಪುಡಿಯಾಗಿದೆ. ಕೊನೆಗೂ ಅರಣ್ಯ ಸಿಬ್ಬಂದಿ ಒಂಟಿ ಸಲಗವನ್ನು ಕಾಡಿಗೆ ಅಟ್ಟಲು ಯಶ್ವಸಿಯಾಗಿದ್ದಾರೆ.
Last Updated : Jan 16, 2020, 11:39 PM IST