ಮಲೆನಾಡು ಭಾಗದಲ್ಲಿ ನಿರಂತರ ಆನೆ ದಾಳಿ...ಬಾಳೆ,ಕಾಫಿ,ಅಡಿಕೆ ಬೆಳೆ ನಾಶ - ಆನೆಗಳಿಂದ ಬೆಳೆ ನಾಶ ನ್ಯೂಸ್
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳ ಹಾವಳಿ ಮೀತಿ ಮೀರಿದ್ದು , ಆನೆಗಳ ನಿರಂತರ ಕಾಟದಿಂದ ಮಲೆನಾಡ ಜನರು ಸುಸ್ತಾಗಿ ಹೋಗಿದ್ದಾರೆ. ಮೂಡಿಗೆರೆ ತಾಲೂಕಿನ ಭೈರಾಪುರ, ಹೊಸಕೆರೆ, ಮೇಕನಗದ್ದೆ, ಊರುಬಗೆ, ಕುಂಬರಡಿ ಗ್ರಾಮದ ಸುತ್ತ ಮುತ್ತ ಕಾಡಾನೆಗಳು ದಾಳಿ ಮಾಡುತ್ತಿದ್ದು, ಬಾಳೆ,ಕಾಫಿ,ಅಡಿಕೆ ಬೆಳೆಯನ್ನು ನಾಶ ಮಾಡುತ್ತಿವೆ.ಸದ್ಯ ಬಾಳೆಗದ್ದೆ ಗ್ರಾಮದಲ್ಲಿ ಐದಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು,ರೈತರ ಬೆಳೆ ನಾಶ ಮಾಡುತ್ತಿವೆ. ಈ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಅರಣ್ಯ ಇಲಾಖೆಯ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಈ ಗ್ರಾಮದಿಂದ ಆನೆಗಳನ್ನು ಓಡಿಸಿದ್ರೆ ಮುಂದಿನ ಗ್ರಾಮದ ರೈತರ ತೋಟಗಳಿಗೆ ಲಗ್ಗೆ ಇಟ್ಟು ಇಲ್ಲಿಯೂ ಬೆಳೆ ನಾಶ ಮಾಡುತ್ತಿವೆ.