ಕರ್ನಾಟಕ

karnataka

ETV Bharat / videos

ಗುಂಡ್ಲುಪೇಟೆ: ಮೇಯುವಂತೆ ನಾಟಕ ಮಾಡಿ ಬೈಕ್​ ಸವಾರರಿಗೆ 'ಚಮಕ್'​ ಕೊಟ್ಟ ಗಜರಾಜ - ಗುಂಡ್ಲುಪೇಟೆಯ ಮದುಮಲೈ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಬಳಿ ಆನೆ ತಿರುಗಾಟ

By

Published : Nov 9, 2020, 3:22 PM IST

ಗುಂಡ್ಲುಪೇಟೆಯ ಮದುಮಲೈ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸಂಚರಿಸುವಾಗ ಆನೆ ದಾಳಿ ಮಾಡಲು ಯತ್ನಿಸಿರುವ ಘಟನೆ ಭಾನುವಾರ ನಡೆದಿದೆ. ಎರಡು ಬೈಕ್​ ಊಟಿಯ ಕಡೆಗೆ ಹೋಗುತ್ತಿದ್ದ ವೇಳೆ ಆನೆಯೊಂದು ರಸ್ತೆಯ ಬದಿಯಲ್ಲಿ ಮೇಯುತ್ತಿತ್ತು. ಹೀಗಾಗಿ ಸಂಚಾರ ಮಾಡಬಹುದು ಎಂದು ಸವಾರರು ಮುಂದೆ ಹೋದಾಗ, ಆನೆ ಅದೇ ವೇಗದಲ್ಲಿ ತಿರುಗಿ ಬೈಕಿನ ಕಡೆಗೆ ದಾಳಿ ಮಾಡಲು ಓಡಿ ಬಂದಿದೆ. ಶೀಘ್ರವೇ ಬೈಕ್ ಸವಾರರು ಬೈಕನ್ನು ಹಿಂದಕ್ಕೆ ತಿರುಗಿಸಿಕೊಂಡು ವಾಪಸ್ ಹೋಗಿದ್ದಾರೆ. ಆನೆ ಸ್ವಲ್ಪ ದೂರ ದಾಳಿ ಮಾಡಲು ಘೀಳಿಡುತ್ತ ಹಿಂಬಾಲಿಸಿದೆ. ಅದೇ ರಸ್ತೆಯಲ್ಲಿ ಬಂದ ಮತ್ತೊಬ್ಬ ಸವಾರರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

ABOUT THE AUTHOR

...view details