ಬಸ್ ಕ್ಯಾರಿಯರ್ಗೆ ಸಿಲುಕಿದ ವಿದ್ಯುತ್ ಲೈನ್: ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರು!
ಕಾರವಾರ: ಖಾಸಗಿ ಬಸ್ ಕ್ಯಾರಿಯರ್ಗೆ ವಿದ್ಯುತ್ ಲೈನ್ ಸಿಲುಕಿದ ಪರಿಣಾಮ ಮೂರು ಕಂಬಗಳು ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರಕನ್ನಡ ಜಿಲ್ಲೆ ಕಾರವಾರ ನಗರದ ಸೇಂಟ್ ಮೈಕಲ್ ಶಾಲೆ ಎದುರು ನಡೆದಿದೆ. ಬಸ್ ಬೆಂಗಳೂರಿನಿಂದ ಆಗಮಿಸಿದ್ದು, ಚಾಲಕನ ನಿರ್ಲಕ್ಷ್ಯದಿಂದ ಬಸ್ನ ಕ್ಯಾರಿಯರ್ಗೆ ಲೈನ್ ಸಿಲುಕಿದೆ ಎನ್ನಲಾಗ್ತಿದೆ. ಸುಮಾರು 50 ಮೀ. ದೂರದವರೆಗೂ ಕಂಬದ ಲೈನ್ಅನ್ನು ಬಸ್ ಎಳೆದೊಯ್ದಿದೆ. ಅಲ್ಲದೆ ಮೂರು ಕಂಬಗಳು ರಸ್ತೆ ಬದಿ ನಿಂತಿದ್ದ ಜನರ ಬಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ನಂತರ ಹೆಸ್ಕಾಂ ಸಿಬ್ಬಂದಿ, ಪೊಲೀಸರು ಲೈನ್ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.