ಕೊಪ್ಪಳ ಜಿಲ್ಲೆಯಲ್ಲಿ 1,210 ಗ್ರಾಮ ಪಂಚಾಯತ್ ಸ್ಥಾನಗಳಿಗೆ ವೋಟಿಂಗ್ - ಕೊಪ್ಪಳ ಜಿಲ್ಲೆಯಲ್ಲಿ 111 ಸ್ಥಾನಗಳಿಗೆ ಅವಿರೋಧ ಆಯ್ಕೆ
ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿ, ಯಲಬುರ್ಗಾ ತಾಲೂಕಿನ 20 ಹಾಗೂ ಕುಕನೂರು ತಾಲೂಕಿನ 15 ಗ್ರಾಮ ಪಂಚಾಯತಿ ಸೇರಿ ಮೊದಲ ಹಂತದಲ್ಲಿ ಒಟ್ಟು 73 ಗ್ರಾಮ ಪಂಚಾಯತಿಗೆ ಮತದಾನ ನಡೆಯುತ್ತಿದೆ. 73 ಗ್ರಾಮ ಪಂಚಾಯತಿಗಳ ಒಟ್ಟು 1,321 ಸ್ಥಾನಗಳ ಪೈಕಿ 111 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 1,210 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಡೆಯುತ್ತಿರುವ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ.