ಕರ್ನಾಟಕ

karnataka

ETV Bharat / videos

ಗ್ರಾಪಂ​ ಚುನಾವಣೆ.. ಚಳಿಯ ನಡುವೆಯೂ ಹುಮ್ಮಸ್ಸಿನಿಂದ ಮತ ಚಲಾಯಿಸಿದ ವಯೋವೃದ್ಧರು - kalburagi elder people voted

By

Published : Dec 27, 2020, 9:23 AM IST

ಕಲಬುರಗಿ : ಇಂದು ಎರಡನೇ ಹಂತದ ಗ್ರಾಮ ಪಂಚಾಯತ್​ ಚುನಾವಣೆ ನಡೆಯುತ್ತಿದ್ದು, ಕೊರೆಯುವ ಚಳಿಯ ನಡುವೆಯೂ ವಯೋವೃದ್ಧರು ಹುಮ್ಮಸ್ಸಿನಿಂದ ಮತ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿ ಯುವಕರಿಗೆ ಮಾದರಿಯಾಗಿದ್ದಾರೆ. ಜಿಲ್ಲೆಯಲ್ಲಿ ಕನಿಷ್ಟ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮೈ ಕೊರೆವ ಚಳಿ ಇದೆ. ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 65ರಲ್ಲಿ ಕೊರೆವ ಚಳಿಯಲ್ಲೂ ವಯೋವೃದ್ಧರು ತಮ್ಮ ಹಕ್ಕು ಚಲಾಯಿಸಿದರು.

ABOUT THE AUTHOR

...view details